

ದಾವಣಗೆರೆ (ಆ28) : ಅವ್ರೇನೋ ಹೇಳ್ತಾರೆ, ನಾನೇನೋ ಹೇಳ್ತೀನಿ. ನೀವೇನೋ ಮಾಡ್ತೀರಾ. ಹಾಗಾಗಿ, ನಾನು ಯಾರ ಬಗ್ಗೆಯೂ ಮಾತನಾಡಲಾ.. ದಯವಿಟ್ಟು ಬೇರೆಯವರಿಗೆ ಸಂಬಂಧಿಸಿದ ಪ್ರಶ್ನೆ ಕೇಳಬೇಡಿ ಎಂದು ಸಂಸದ ಜಿ ಎಂ ಮನವಿ ಮಾಡಿದರು.
ಇಂದು ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್.ಮಲ್ಲಿಕಾರ್ಜುನ್ ರ ಹಾಗೂ ಮಾಡಳ್ ವಿರೂಪಾಕ್ಷಪ್ಪ ಕುರಿತಂತೆ ನನ್ನ ಬಳಿ ಕೇಳುತ್ತೀರಾ. ನಾನು ಹೇಳಿದ್ದನ್ನು ಅವರ ಬಳಿ ಕೇಳುತ್ತೀರಾ. ಅವ್ರೇನೋ ಹೇಳುತ್ತಾರೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡುತ್ತೇನೆ. ಅದೇನೋ ಆಗುತ್ತೆ. ಸುಖಾಸುಮ್ಮನೆ ವಿವಾದ ಬೇಡ ಎಂದು ದಾವಣಗೆರೆ ಸಂಸದ ಜಿಎಮ್ ಸಿದ್ದಶ್ವೇರ್ ಹೇಳಿದರು

ಜೊತೆಗೆ ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಅವರದ್ದು. ನಮ್ಮ ಪಕ್ಷದ ತತ್ವ, ಸಿದ್ಧಾಂತ ನಮ್ಮದು. ರಾಜಕೀಯವಾಗಿ ಹೋರಾಡುತ್ತೇನೆ. ಯಾರಿಗೆ ಜನರು ಮತ ನೀಡುತ್ತಾರೋ ಅವರು ಗೆಲ್ಲುತ್ತಾರೆ. ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್.ಮಲ್ಲಿಕಾರ್ಜುನ್ ಅವರು ನನ್ನ ಬಗ್ಗೆ ಹೇಳಿದರು ಎಂದು ನೀವು ಪ್ರಶ್ನೆ ಕೇಳೋದು. ನಾನು ಅದಕ್ಕೇನೋ ಹೇಳೋದು. ಮತ್ತೆ ನೀವು ಅವರಿಗೆ ಪ್ರಶ್ನೆ ಹಾಕೋದು. ಅದು ಇನ್ನೋನೋ ಆಗುವುದು ಬೇಡ. ನಾನು ಯಾರ ಬಗ್ಗೆಯೂ ಮಾತನಾಡಲು
ಹೋಗುವುದಿಲ್ಲ. ಮಾಧ್ಯಮದವರು ಕೆದಕಿ ಕೆದಕಿ ಪ್ರಶ್ನೆ ಕೇಳಿ ಸಮಸ್ಯೆ ತಂದೊಡ್ಡುವುದು ಬೇಡ ಎಂದರು
ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಜಗದೀಶ್, ಮಹಾನಗರ ಪಾಲಿಕೆ ಉಪಮೇಯರ್ ಯಶೋಧಾ, ಜಿಲ್ಲಾ ಬಿಜೆಪಿ ವಕ್ತಾರ ಶಿವಶಂಕರ್, ವಿಶ್ವಾಸ್, ಮಂಜಾ ನಾಯ್ಕ್ ಮತ್ತಿತರರು ಹಾಜರಿದ್ದರು.