ಕುಖ್ಯಾತ ಅಂತರ್ ರಾಜ್ಯ ಮನೆಗಳ್ಳನ ಬಂಧನ 34 ಲಕ್ಷ ಬೆಲೆಬಾಳುವ ಮಾಲು ವಶ

ದಾವಣಗೆರೆ, (ಆ.28):

ದಿನಾಂಕ:೨೦.೦೮.೨೦೨೩ ರಂದು ಫರ‍್ಯಾದಿ ಶ್ರೀ. ಶಂಕರ್ ಜಿ.ಹೆಚ್ ತಂದೆ ಹಾಲೇಶಪ್ಪ ಜಿ.ಪಿ ೬೩ ವರ್ಷ, ವಾಸ- ಕೆನರಾ ಬ್ಯಾಂಕ್ ಎದುರು ವಿದ್ಯಾನಗರ ದಾವಣಗೆರೆ ರವರು ಠಾಣೆಗೆ ಹಾಜರಾಗಿ ದಿನಾಂಕ:೧೭.೦೮.೨೦೨೩ ರಂದು ಮಧ್ಯಾಹ್ನ ೦೨.೦೦ ಗಂಟೆಗೆ ನಮ್ಮ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಕುಟುಂಬ ಸಮೇತಾ ಬೆಂಗಳೂರಿಗೆ ಹೋಗಿದ್ದು. ದಿನಾಂಕ:೨೦.೦೮.೨೦೨೩ ರಂದು ವಾಪಸ್ಸು ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲನ್ನು ಹೊಡೆದು ಮನೆಯಲ್ಲಿದ್ದ ೨೬೨ಗ್ರಾಂ ಬಂಗಾರದ ಆಭರಣಗಳು, ೧೫೦೦ಗ್ರಾಂ ಬೆಳ್ಳಿ ಆಭರಣಗಳು, ಮತ್ತು ೧,೨೦,೦೦೦/-ರೂ ನಗದು ಹಣ ಹಾಗೂ ೧೦೦೦/- ಅಮೆರಿಕನ್ ಡಾಲರ್ ಕಳ್ಳತನವಾಗಿರುತ್ತದೆ ಎಂದು ದೂರನ್ನು ನೀಡಿದ್ದರು

ಈ ಹಿನ್ನೆಲೆ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ. ಆರ್.ಬಿ ಬಸರಗಿ ಹಾಗೂ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಶ್ರೀ.ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ, ವಿದ್ಯಾನಗರ ಪೊಲೀಸ್ ಠಾಣೆಯ ಪ್ರಭಾರದಲ್ಲಿದ್ದ ಶ್ರೀ ಯಶವಂತ್‌ಕುಮಾರ್ ಪ್ರೋ.ಡಿವೈಎಸ್‌ಪಿ, ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ ಪ್ರಭಾವತಿ.ಸಿ.ಶೇತಸನದಿ ರವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡವು ಪ್ರಕರಣದ ಆರೋಪಿತನಾದ ಮಂಜುನಾಥ @ ಕಲ್ಕೇರೆ ಮಂಜಾ @ ಮಂಜಾ, ೪೩ ವರ್ಷ, ವಾಸ- ಭುವನೇಶ್ವರಿ ನಗರ, ಉತ್ತರಹಳ್ಳಿ ಬೆಂಗಳೂರು ಖಾಯಂ ವಿಳಾಸ- ರಾಣೀಪೇಟೆ ಕೃಷ್ಣಗಿರಿ ತಾಲ್ಲೂಕ್ ತಮಿಳುನಾಡು ರಾಜ್ಯ ರವರನ್ನು ಪತ್ತೆ ಮಾಡಿ ಆರೋಪಿತನಿಂದ ಕಳ್ಳತನ ಮಾಡಿದ್ದ ಸುಮಾರು ೧೫,೬೩,೬೦೦/-ರೂ ಬೆಲೆ ಬಾಳುವ ೨೧೦ಗ್ರಾಂ ಡೈಮೆಂಡ್ ಸಮೇತಾ ಬಂಗಾರದ ಆಭರಣಗಳು ಮತ್ತು ಬಂಗಾರದ ಗಟ್ಟಿ, ೪೭,೪೦೦/-ರೂ ಬೆಲೆ ಬಾಳುವ ಬೆಳ್ಳಿಯ ಆಭರಣಗಳು, ೩೭೯೭೩/-ರೂ ಬೆಲೆ ಬಾಳುವ ೪೬೦/- ಅಮೇರಿಕನ್ ಡಾಲರ್, ಕಳ್ಳತನ ಮಾಡಿದ್ದ ೧೩,೫೦,೦೦೦/-ರೂ ಬೆಲೆ ಬಾಳುವ ಕೆ.ಎ-೧೭ಎಂ.ಎ-೧೪೬೬ನೇ ಬ್ರೀಜ್ಜಾ ಕಾರ್, ಮತ್ತು ಕೃತ್ಯಕ್ಕೆ ಬಳಿಸಿದ ೪ ಲಕ್ಷ ಬೆಲೆ ಬಾಳುವ ಕೆ.ಎ-೫೧ ಪಿ-೫೨೫೦ ಸ್ವೀಫ್ಟ್ ಡೀಜರ್ ಕಾರನ್ನು ಅಮಾನತ್ತು ಪಡಿಸಿಕೊಂಡಿದ್ದು. ವಿದ್ಯಾನಗರ ಪೊಲೀಸ್ ಠಾಣೆಯ ಒಟ್ಟು ೦೩ ಮನೆ ಕಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತದೆ. ಉಳಿದ ಆರೋಪಿ ಮತ್ತು ಮಾಲು ಪತ್ತೆ ಕಾರ್ಯ ಪ್ರಗತಿಯಲ್ಲಿರುತ್ತದೆ, ಎಂದು ಹೇಳಲಾಗುತ್ತದೆ

  • Related Posts

    ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭ…

    ದಿನಾಂಕ: 01-01-2025 ರಿಂದ 31-01-2025 ಒಂದು ತಿಂಗಳ ಕಾಲ ಪ್ರತಿ ವರ್ಷದಂತೆ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದು, ಇಂದು ದಾವಣಗೆರೆ ನಗರದ ರೇಣುಕಾ ಮಂದಿರದ ಕಲ್ಯಾಣ ಮಂಟಪದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ…

    ಶಾಲಾ ಆವರಣ ಅನೈತಿಕ ತಾಣಗಳಾಗಬಾರದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು, ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್….

    ದಾವಣಗೆರೆ, ಜನವರಿ.28 : ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಆಸನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಶಿಕ್ಷಣ ಭವಿಷ್ಯದ ನಾಗರಿಕರಾಗುವ ಪ್ರತಿ ಮಕ್ಕಳಿಗೆ ಸಿಗುವಂತೆ ಮಾಡಬೇಕು, ಆದರೆ ಸಂಜೆಯ ವೇಳೆ…

    Leave a Reply

    Your email address will not be published. Required fields are marked *

    error: Content is protected !!