ಕೋತಿ (ಮುಷ್ಯ) ಕಾಟಕ್ಕೆ ಬೇಸತ್ತ ಕುಂದುವಾಡ ಗ್ರಾಮಸ್ಥರು..! ನಿನ್ನೆ ಜಸ್ಟ್ ಮಿಸ್ ಆಗಿದ ಕೋತಿ,, ಬೋನಿಗೆ ಬಿದ್ದಿದ್ದು ಹೇಗೆ..?

ದಾವಣಗೆರೆ(ಆ24) : ಮುಷ್ಯ ಒಂದು ಸಿಕ್ಕ ಸಿಕ್ಕವರ ಮೇಲೆ ಎಗರುತ್ತಾ ಕಚ್ಚಿ, ದೂಡಿ ಹೋಗುತ್ತಿತ್ತು, ಮುಷ್ಯಯ ಉಪಟಳಕ್ಕೆ ಜನರು ಬೇಸತ್ತು ಹೋಗಿದ್ದರು, ನಿನ್ನೆ ಬೋನಿನೊಳಗೆ ಬಂದು ಜಸ್ಟ್ ಮಿಸ್ ಆಗಿ ತಪ್ಪಿಸಿಕೊಂಡು ಹೋಗಿದ್ದ ಮುಷ್ಯ ಇಂದು ಬೋನಿಗೆ ಬಿದ್ದು ಲಾಕ್ ಆಗಿದೆ..

ಹೌದು.. ಈ ಘಟನೆ ನಡೆದಿದ್ದು ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ, ಇಪ್ಪತ್ತಕ್ಕೂ ಹೆಚ್ಚು ಜನರಿಗೆ, ಮಕ್ಕಳಿಗೆ ಕಚ್ಚಿ ಘಾಸಿಗೊಳಿಸಿತ್ತು, ಮಕ್ಕಳು ಶಾಲೆಗೆ ಹೋಗಲು, ವಾಪಾಸ್ ಮನೆಗೆ ತೆರಳಲು ಭಯಪಡಿತ್ತಿದ್ದರು, ಮುಷ್ಯ ಬೈಕ್ ಸವಾರರನ್ನೆ ಹೆಚ್ಚು ಟಾರ್ಗೆಟ್ ಮಾಡುತ್ತಿತ್ತು, ಬೈಕ್ ನಲ್ಲಿ ಹೋಗುತ್ತಿದ್ದವರ ಹೆಗಲ ಮೇಲೆ ಓಡಿ ಬಂದು ಕೂತು ಕಚ್ಚುತ್ತಿತ್ತು, ಇದರಿಂದ ಹೆದರಿ ಎಷ್ಟೊ ಜನ ಬೈಕ್ ನಿಂದ ಬಿದ್ದು ಗಾಯಗೊಂಡಿದ್ದರು, ನಿಂತಿದ್ದ ಬೈಕ್ ಗಳನ್ನು ಕಾಲಿನಿಂದ ದೂಡಿ ಬೀಳಿಸುತ್ತಿತ್ತು, ಮುಷ್ಯನ ಕೀಟಲೆಯಿಂದ ಜನರು ಬೇಸತ್ತು ಹೋಗಿದ್ದರು,

ಈ ಹಿನ್ನಲೆ ಜನರು ಅರಣ್ಯ ಇಲಾಖೆ ಉಪ ಸಂರಕ್ಷಣಾ ಅಧಿಕಾರಿ ಶಶಿಧರ್ ಅವರಿಗೆ ದೂರು ನೀಡಿದ್ದರು, ದೂರು ಹಿನ್ನಲೆ ಕಾರ್ಯಾಚರಣೆಗೆ ಇಳಿದಿದ್ದ ಅರಣ್ಯ ಇಲಾಖೆ ನಾಲ್ಕೈದು ದಿನದಿಂದ ಬೋನಿಟ್ಟು ಕಾದಿತ್ತು, ಬೋನಿನೊಳಗೆ ಬಾಳೆಹಣ್ಣು, ಬಿಸ್ಕೆಟ್ ಇಡಲಾಗಿತ್ತು, ನಿನ್ನೆ ಬಾಳೆಹಣ್ಣು ತಿನ್ನುತ್ತಾ ಬೋನಿನೊಳಗೆ ಕೋತಿ ಹೋಗಿತ್ತು, ಆದರೆ ಕೂಡಲೇ ಎಚ್ಚೆತ್ತ ಮುಷ್ಯ ಲಾಕ್ ಬೀಳುವ ಮೊದಲೇ ಎಸ್ಕೇಪ್ ಆಗಿ ಓಡಿ ಹೋಗಿತ್ತು..

ಮತ್ತೆ ಇಂದು ಬೆಳಿಗ್ಗೆ ಅರಣ್ಯ ಇಲಾಖೆಗೆ ಕರೆ ಮಾಡಿ ಹೆಚ್ಚಿನ ಸಿಬ್ಬಂದಿ ಕಳುಹಿಸುವಂತೆ ಮನವಿ ಮಾಡಿದ ಹಿನ್ನಲೆ ಕೋರಿಕೆಗೆ ಸ್ಪಂದಿಸಿದ ಇಲಾಖೆ, ನಾಲ್ಕು ಜನರ ತಂಡವನ್ನ ಕಳುಹಿಸಿತ್ತು, ಒಂದು ಭಾರೀ ತಪ್ಪಿಸಿಕೊಂಡು ಹೋಗಿದ್ದರಿಂದ ಆ ಒಂದು ಸ್ಥಳದಲ್ಲಿ ಮುಷ್ಯ ಸುಳಿದಿರಲಿಲ್ಲ, ಹೀಗಾಗಿ ಇನ್ನೊಂದು ಪ್ರದೇಶದಲ್ಲಿ ಬೋನಿಟ್ಟು ಮತ್ತೆ ಹಣ್ಣುಗಳನ್ನು ಇಟ್ಟು ಜೊತೆಗೆ ಮಿರರ್ ಇಡಲಾಗಿತ್ತು,

ಇಂದು ಮುಷ್ಯನ ಗ್ರಹಚಾರ ಬೋನಿನ ಮೂಲಕ ಕಾದು ಕೂಳಿತ್ತಿತ್ತೇನೋ, ಹಣ್ಣು ತಿನ್ನುತ್ತಾ ಬೋನಿನ ಒಳಗೆ ಹೋದ ತಕ್ಷಣ ಸಿಬ್ಬಂದಿ ಬೋನ್ ಲಾಕ್ ಮಾಡಿದ್ದು, ಕೊನೆಗೂ ಬೋನಿಗೆ ಮುಷ್ಯ ಬಿದ್ದಿದೆ, ಇದರಿಂದ ಕುಂದುವಾಡ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು ಅರಣ್ಯ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ. ಇನ್ನೂ ಕಾರ್ಯಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಇದಾಯಿತ್, ಹರೀಶ್, ಮರುಳಸಿದ್ದಪ್ಪ, ದೇವರಾಜ್, ಶರಣಪ್ಪ ಸೇರಿದಂತೆ ಮತ್ತಿತರರು ಭಾಗೀಯಾಗಿದ್ದರು..

  • Related Posts

    ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭ…

    ದಿನಾಂಕ: 01-01-2025 ರಿಂದ 31-01-2025 ಒಂದು ತಿಂಗಳ ಕಾಲ ಪ್ರತಿ ವರ್ಷದಂತೆ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದು, ಇಂದು ದಾವಣಗೆರೆ ನಗರದ ರೇಣುಕಾ ಮಂದಿರದ ಕಲ್ಯಾಣ ಮಂಟಪದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ…

    ಶಾಲಾ ಆವರಣ ಅನೈತಿಕ ತಾಣಗಳಾಗಬಾರದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು, ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್….

    ದಾವಣಗೆರೆ, ಜನವರಿ.28 : ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಆಸನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಶಿಕ್ಷಣ ಭವಿಷ್ಯದ ನಾಗರಿಕರಾಗುವ ಪ್ರತಿ ಮಕ್ಕಳಿಗೆ ಸಿಗುವಂತೆ ಮಾಡಬೇಕು, ಆದರೆ ಸಂಜೆಯ ವೇಳೆ…

    Leave a Reply

    Your email address will not be published. Required fields are marked *

    error: Content is protected !!