

ನಂಜಪ್ಪ ಆಸ್ಪತ್ರೆಯು ಶಿವಮೊಗ್ಗದಲ್ಲಿ 35 ವರ್ಷಗಳ ಸುದೀರ್ಘ ಪರಂಪರೆಯನ್ನು ಹೊಂದಿರುವ ವಿಶ್ವಾಸಾರ್ಹ ಆರೋಗ್ಯ ಸಂಸ್ಥೆ ಎನಿಸಿದೆ. ಈಗ ನಂಜಪ್ಪ ಆಸ್ಪತ್ರೆಯು ತನ್ನ ಉತ್ಕೃಷ್ಟ ವೈದ್ಯಕೀಯ ಆರೈಕೆಯನ್ನು ದಾವಣಗೆರೆಯ ಜನರಿಗೂ ವಿಸ್ತರಿಸಿದೆ. ಆಸ್ಪತ್ರೆಯ ಸಮರ್ಪಿತ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರ ತಂಡವು ಈಗಾಗಲೇ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ತನ್ನ ಪರಿಣತಿಯನ್ನು ಸಾಬೀತುಪಡಿಸಿದೆ. ಇದು ರೋಗಿಯ ಯೋಗಕ್ಷೇಮಕ್ಕೆ ಈ ವೈದ್ಯರ ತಂಡ ಹೊಂದಿರುವ ಸಮರ್ಪಣಾ ಭಾವಕ್ಕೆ ಉದಾಹರಣೆಯಾಗಿದೆ.
ದಾವಣಗೆರೆಗೆ ವೈದ್ಯಕೀಯ ಆರೈಕೆಯ ವಿಸ್ತರಣೆಯು ನಂಜಪ್ಪ ಆಸ್ಪತ್ರೆ ಪಾಲಿಗೆ ಮಹತ್ವದ ಮೈಲುಗಲ್ಲು. ಏಕೆಂದರೆ ಈ ಪ್ರದೇಶದ ಆರೋಗ್ಯ ಕ್ಷೇತ್ರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಪ್ರಯತ್ನವನ್ನು ನಂಜಪ್ಪ ಆಸ್ಪತ್ರೆಯು ಮಾಡಲಿದೆ. ಅತ್ಯಾಧುನಿಕ ಸೌಲಭ್ಯಗಳು ಮತ್ತು ರೋಗಿ ಕೇಂದ್ರಿತ ಚಿಕಿತ್ಸಾ ವಿಧಾನದೊಂದಿಗೆ, ದಾವಣಗೆರೆಯ ನಂಜಪ್ಪ ಆಸ್ಪತ್ರೆಯು ಉನ್ನತ ದರ್ಜೆಯ ವೈದ್ಯಕೀಯ ಸೇವೆಗಳನ್ನು ಒದಗಿಸಲು ಸಜ್ಜಾಗಿದೆ. ಕಳೆದ 35 ವರ್ಷಗಳಿಂದ ಶಿವಮೊಗ್ಗದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದಂತೆಯೇ ದಾವಣಗೆರೆಯ ಸಮುದಾಯಕ್ಕೆ ಸೇವೆ ಸಲ್ಲಿಸಲು ಹಾಗೂ ಇಲ್ಲಿನ ನಿವಾಸಿಗಳ ಯೋಗಕ್ಷೇಮಕ್ಕೆ ಕೊಡುಗೆ ನೀಡಲು ಹೊಸ ಶಾಖೆಯು ಉತ್ಸುಕವಾಗಿದೆ.
.

ಪ್ರಕರಣ 1: ರೆಟ್ರೊಪೆರಿಟೋನಿಯಲ್ ಪ್ಯಾರಾಗ್ಲಿಯೋಮಾ ಸಿಂಡ್ರೋಮ್ ಜೊತೆ ಬೈಲ್ಯಾಟರಲ್ ಮೆಟಾನೆಫ್ರಿನ್-ಸೆಕ್ರೆಟಿಂಗ್ ಫಿಯೋಕ್ರೊಮೊಸೈಟೋಮಾ
ದಾವಣಗೆರೆಯ ನಂಜಪ್ಪ ಆಸ್ಪತ್ರೆಯು ಸಂಕೀರ್ಣ ವೈದ್ಯಕೀಯ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಅತ್ಯುತ್ತಮ ಪರಿಣತಿ ತೋರುವುದರ ಜೊತೆಗೆ ರೋಗಿಗಳತ್ತ ಸಹಾನುಭೂತಿಯೊಂದಿಗೆ ಆರೈಕೆಯನ್ನು ಒದಗಿಸಿದೆ. ಚಿತ್ರದುರ್ಗದ 45 ವರ್ಷದ ಮಹಿಳೆ ಮೂರು ವರ್ಷಗಳಿಂದ ನಿರಂತರ ತಲೆನೋವು ಮತ್ತು ಅತಿವೇಗದ ಹೃದಯ ಬಡಿತವನ್ನು ಅನುಭವಿಸುತ್ತಿದ್ದರು. ʻಡಯಾಬಿಟಿಸ್ ಮೆಲ್ಲಿಟಸ್ʼ(ಡಿಎಂ), ಅಧಿಕ ರಕ್ತದೊತ್ತಡ (ಎಚ್‌ಟಿಎನ್) ಹಾಗೂ ಸಣ್ಣ ಪಾರ್ಶ್ವವಾಯುವಿನ ಸಮಸ್ಯೆಯನ್ನೂ ಅವರು ಹೊಂದಿದ್ದರು. ಅವರು ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣಕ್ಕಾಗಿ ದಿನಕ್ಕೆ 14 ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಆರೋಗ್ಯ ಸ್ಥಿತಿಯನ್ನು ನಿಭಾಯಿಸುತ್ತಿದ್ದರು.
ಖ್ಯಾತ ಎಂಡೋಕ್ರಿನೊಲಜಿ ತಜ್ಞರಾದ (ಅಂತಃಸ್ರಾವಶಾಸ್ತ್ರಜ್ಞ) ಡಾ.ಬ್ರಿಜೇಶ್ ಅವರು ರೋಗಿಯ ಬೈಲ್ಯಾಟರಲ್ ಮೆಟಾನೆಫ್ರಿನ್ (ಹಾರ್ಮೋನ್) ʻಫಿಯೋಕ್ರೊಮೊಸೈಟೋಮಾʼ ಸ್ರವಿಸುತ್ತಿರುವುದನ್ನು ಮತ್ತು ಆಕೆಯು ʻರೆಟ್ರೊಪೆರಿಟೋನಿಯಲ್ ಪ್ಯಾರಾಗ್ಲಿಯೋಮಾ ಸಿಂಡ್ರೋಮ್ʼ ಎಂಬ ಸಮಸ್ಯೆ ಹೊಂದಿರುವುದನ್ನು ನಿಖರವಾಗಿ ಪತ್ತೆ ಹಚ್ಚಿದರು. ಅವರ ಅಧಿಕ ರಕ್ತದೊತ್ತಡ ಮತ್ತು ಮಧುಮೇಹವನ್ನು ಯಶಸ್ವಿಯಾಗಿ ಸ್ಥಿರಗೊಳಿಸಿದ ನಂತರ, ನಂಜಪ್ಪ ಆಸ್ಪತ್ರೆಯು ಸಂಕೀರ್ಣ ಶಸ್ತ್ರಚಿಕಿತ್ಸೆ ನಿರ್ವಹಣೆಯನ್ನು ಕೈಗೆತ್ತಿಕೊಂಡಿತು. ನುರಿತ ಕ್ಯಾನ್ಸರ್ ಶಸ್ತ್ರಚಿಕಿತ್ಸಕರಾದ ಡಾ. ನಿಶ್ಚಲ್ ಎನ್, ಅರವಳಿಕೆ ಮತ್ತು ಐಸಿಯು ವಿಭಾಗದ ಡಾ. ವಿಜಯ್ ಚಂದ್ರಪ್ಪ ಹಾಗೂ ಕ್ಯಾನ್ಸರ್ ರೋಗನಿರ್ಣಯ ವಿಭಾಗದ (ಆಂಕೋಪಾಥಾಲಜಿ) ಡಾ. ವೆಂಕಟೇಶ್ವರುಲು ಅವರ ತಂಡವು ಅಪರೂಪದ ಹಾಗೂ ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಇದರ ಪರಿಣಾಮವಾಗಿ ಎಲ್ಲಾ 3 ಗೆಡ್ಡೆಗಳನ್ನು ಯಶಸ್ವಿಯಾಗಿ ತೆಗೆದುಹಾಕಲಾಯಿತು. ಚಿಕಿತ್ಸೆಯ ನಂತರ, ರೋಗಿಗೆ ಈಗ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಮಾತ್ರೆಗಳ ಅಗತ್ಯವೇ ತಗ್ಗಿದೆ. ಜೊತೆಗೆ ಅವರು ತಮ್ಮ ತಲೆನೋವಿನ ಸಮಸ್ಯೆಯಿಂದ ಅತ್ಯುತ್ತಮ ಪರಿಹಾರವನ್ನು ಪಡೆದಿದ್ದಾರೆ.
ಪ್ರಕರಣ 2: ಕ್ಲಿಷ್ಟಕರ ಯಕೃತ್ (ಲಿವರ್) ಶಸ್ತ್ರಚಿಕಿತ್ಸೆ
ಡಯಾಬಿಟಿಸ್ ಮೆಲ್ಲಿಟಸ್ (ಡಿಎಂ) ಮತ್ತು ಅಧಿಕ ರಕ್ತದೊತ್ತಡ (ಎಚ್‌ಟಿಎನ್) ಹೊಂದಿರುವ 65 ವರ್ಷದ ಪುರುಷರೊಬ್ಬರು ಬಲ ಮೇಲ್ಭಾಗದ ಹೊಟ್ಟೆ ನೋವಿನಿಂದ ನಂಜಪ್ಪ ಆಸ್ಪತ್ರೆಗೆ ಬಂದಿದ್ದರು. ಸಮಗ್ರ ಪರಿಶೀಲನೆ ಮತ್ತು ಚಿಕಿತ್ಸಾ ಪೂರ್ವ ಚಿತ್ರಣದಲ್ಲಿ ಅವರ ಬಲ ಹೊಟ್ಟೆಯ ಭಾಗದಲ್ಲಿ ಯಕೃತ್ತಿನ ಕ್ಯಾನ್ಸರ್ ಪತ್ತೆಯಾಯಿತು. ನಂತರ, ರೋಗಿಯನ್ನು ನಂಜಪ್ಪ ಆಸ್ಪತ್ರೆಯಲ್ಲಿ ಪ್ರಮುಖ ಯಕೃತ್ತು ಶಸ್ತ್ರಚಿಕಿತ್ಸೆಗೆ (ಹೆಪಟೆಕ್ಟಮಿ) ಒಳಪಡಿಸಲಾಯಿತು.
ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಲ್ಲಿ ರಕ್ತ ನಷ್ಟ, ಯಕೃತ್ತಿನ (ಲಿವರ್) ವೈಫಲ್ಯ, ಪಿತ್ತರಸ ಸೋರಿಕೆ, ಸೋಂಕು ಮತ್ತು ರಕ್ತಸೋಂಕಿನಂತಹ ಗಂಭೀರ ಸವಾಲುಗಳಿದ್ದವು. ಆದರೂ ವೈದ್ಯಕೀಯ ತಂಡದ ಅಚಲ ಸಮರ್ಪಣೆ ಮತ್ತು ಪರಿಣತಿ ಮೇಲುಗೈ ಸಾಧಿಸಿತು. ಇದು ಯಶಸ್ವಿ ಫಲಿತಾಂಶಕ್ಕೆ ಕಾರಣವಾಯಿತು. ರೋಗಿಯು ಶಸ್ತ್ರಚಿಕಿತ್ಸೆಯ ನಂತರ ಅತ್ಯುತ್ತಮ ಚೇತರಿಕೆಯನ್ನು ಕಂಡರು. ಇದರಿಂದ ಅವರ ಹಳೆಯ ದುಃಖ ಗಮನಾರ್ಹವಾಗಿ ಶಮನವಾಯಿತು.

ಪ್ರಕರಣ 3: ಬಾಯಿಯ ಕ್ಯಾನ್ಸರ್‌ಗೆ ʻಫ್ರೀ ಫ್ಲಾಪ್ʼ
ಮದ್ಯಪಾನ ಮತ್ತು ತಂಬಾಕು ಸೇವನೆ ಅಭ್ಯಾಸ ಹೊಂದಿದ್ದ ಯುವಕರೊಬ್ಗಬರಿಗೆ ಎಡ ಕೆನ್ನೆಯಲ್ಲಿ ಹುಣ್ಣು ಕಾಣಿಸಿಕೊಂಡಿತು. ಅವರು ಕಳೆದ ಆರು ತಿಂಗಳಿಂದಲೂ ಅದನ್ನು ನಿರ್ಲಕ್ಷಿಸಿದ್ದರು. ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಈ ರೋಗಿಯು, ಈ ಹಿಂದೆ ʻಕೀಮೋಥೆರಪಿʼಯನ್ನು ಪಡೆದಿದ್ದರು. ದುರದೃಷ್ಟವಶಾತ್ ಅದರಿಂದ ಫಲಿತಾಂಶ ದೊರೆಯಲಿಲ್ಲ. ರೋಗಿಯ ಚಿಕ್ಕ ವಯಸ್ಸು ಮತ್ತು ಆತನ ರೋಗದ ಸ್ಥಿತಿಯ ತೀವ್ರತೆಯನ್ನು ಪರಿಗಣಿಸಿ, ಪ್ರಮುಖ ಶಸ್ತ್ರಚಿಕಿತ್ಸೆ ಮಾಡುವುದು ಅಗತ್ಯವೆಂದು ಪರಿಗಣಿಸಲಾಯಿತು.
ಡಾ.ನಿಶ್ಚಲ್ ಎನ್ ಮತ್ತು ಅವರ ತಂಡವು ಎಡ ದವಡೆಯ ಸಂಯೋಜಿತ ಮರು ಜೋಡಣೆ (ಆರ್ಬಿಟಲ್ ಪ್ಲೇಟ್ ಪ್ರೆಸರ್ವಿಂಗ್ ಮ್ಯಾಕ್ಸಿಲೆಕ್ಟಮಿ) ಮತ್ತು ಕತ್ತಿನ ಎಡ ಬದಿಯಲ್ಲಿ ಮಾರ್ಪಾಡಾದ ಭಾಗದ ಕತ್ತರಿಸುವಿಕೆಯನ್ನು (ಎಂಆರ್‌ಎನ್‌ಡಿ) ʻಟ್ರಾಕಿಯೋಸ್ಟಮಿʼಯೊಂದಿಗೆ ನಿರ್ವಹಿಸಿತು. ಇದಕ್ಕೆ ಪೂರಕವಾಗಿ ʻಫ್ರೀ ಆಂಟೆರೊಲೇಟರಲ್ ಥೈ (ಎಎಲ್ಟಿ) ಫ್ಲಾಪ್ʼ ಅನ್ನು ನೀಡಲಾಯಿತು. ಈ ಪ್ರದೇಶದಲ್ಲಿ ಈ ರೀತಿಯ ಮೊದಲ ಗಮನಾರ್ಹ ಪ್ರಕರಣಗಳಲ್ಲಿ ಇದು ಒಂದಾಗಿದ್ದು, ʻಫ್ರೀ ಫ್ಲಾಪ್ʼ ಕಾರ್ಯ ವಿಧಾನವನ್ನು ಯಶಸ್ವಿಯಾಗಿ ನಡೆಸಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಗಾಯಗುಣಪಡಿಸುವ ಸಂಬಂಧ ಸಣ್ಣ ಪುಟ್ಟ ಸಮಸ್ಯೆಗಳು ಉದ್ಭವಿಸಿದರೂ, ಅವುಗಳನ್ನು ಶಸ್ತ್ರಚಿಕಿತ್ಸಾ ತಂಡವು ತ್ವರಿತವಾಗಿ ಮತ್ತು ನಿಖರವಾಗಿ ನಿರ್ವಹಿಸಿತು. ರೋಗಿ ಈಗ ತಿನ್ನುತ್ತಿದ್ದಾರೆ ಮತ್ತು ಚೆನ್ನಾಗಿದ್ದಾರೆ.
ಎಲ್ಲಾ ಮೂವರು ರೋಗಿಗಳಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿದ್ದು, ಈಗ ಆರೋಗ್ಯಕರ ಮತ್ತು ಸಂತೋಷದ ಜೀವನದ ಹಾದಿಯಲ್ಲಿದ್ದಾರೆ. ಗಂಭೀರ ವೈದ್ಯಕೀಯ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಉತ್ಕೃಷ್ಟತೆಗೆ ಆಸ್ಪತ್ರೆಯ ಬದ್ಧತೆಯು ವೈವಿಧ್ಯಮಯ ಹಿನ್ನೆಲೆಯ ರೋಗಿಗಳ ಜೀವನದಲ್ಲಿ ಗಮನಾರ್ಹ ವ್ಯತ್ಯಾಸವನ್ನು ಉಂಟು ಮಾಡುತ್ತಿದೆ.
ನಂಜಪ್ಪ ಆಸ್ಪತ್ರೆಯ ʻಆಂಕಾಲಾಜಿʼ(ಕ್ಯಾನ್ಸರ್) ವಿಭಾಗವು ಸುಧಾರಿತ ʻಫ್ಲೋರೋಸಿನ್ ಗೈಡೆಡ್ ಎಚ್‌ಡಿ ಲ್ಯಾಪರೋಸ್ಕೋಪಿʼ ಘಟಕ ಮತ್ತು ಆಪರೇಷನ್ ಥಿಯೇಟರ್ (ಒಟಿ) ಅನ್ನು ಹೊಂದಿದೆ. ಜೊತೆಗೆ ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯ ಆಂಕಾಲಾಜಿ ಎರಡರಲ್ಲೂ ಸಮಗ್ರ ಮತ್ತು ಸುಧಾರಿತ ಕ್ಯಾನ್ಸರ್ ಆರೈಕೆಯನ್ನು ಒದಗಿಸುತ್ತದೆ.