

ಬೆಳಗಾವಿ(ಆ 21), ಅಥಣಿ ತಾಲೂಕಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಬೆಳಗಾವಿ ನಿವಾಸಿಯಾದ ಗೌರಂಗ ಗೆಜ್ಜೆ ಎಂಬ ವ್ಯಕ್ತಿ ತನ್ನ ಇತ್ತೀಚಿನ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡುತ್ತಾ ವೀರರಾಣಿ ಕಿತ್ತೂರು ಚನ್ನಮ್ಮಾ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಬಗ್ಗೆ ಹೇಳುತ್ತಾ ಅವರು ಯಾರು ಸ್ವಾತಂತ್ರ್ಯ ಹೋರಾಟಗಾರರು ಅಲ್ಲ ಎಂಬ ಹೇಳಿಕೆಯನ್ನು ನೀಡಿರುತ್ತಾನೆ.
ಇದು ಆರು ಕೋಟಿ ಕನ್ನಡಿಗರ ಮತ್ತು ದೇಶ ಪ್ರೇಮಿಗಳ ಕಂಗೆಣ್ಣಿಗೆ ಗುರಿಯಾಗಿದ್ದಾನೆ. ರಾಣಿ ಚನ್ನಮ್ಮಾ ಮತ್ತು ಸಂಗೋಳ್ಳಿ ರಾಯಣ್ಣಾ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಮೊದಲು ಹೋರಾಡಿದ ವ್ಯಕ್ತಿಗಳು ಇವರಾಗಿದ್ದಾರೆ. ಬಹುಶಃ ಇದನ್ನು ನಾಡದ್ರೋಹಿಗಳು ಮರೆತಿದ್ದಾರೆ. ಬೆಳಗಾವಿಯ ಗಡಿ ಭಾಗದಲ್ಲಿ ಕೋಮು-ಗಲಿಬೆ ಸೃಷ್ಠಿಸುವಂತಹ ಇಂತಹ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಜಯಕರ್ನಾಟಕ ಸಂಘಟನೆ ಒತ್ತಾಯಿ ಪ್ರತಿಭಟನೆ ನಡೆಸಿದ್ದಾರೆ.

ಜೊತೆಗೆ ಇತನದ್ದು ಇದು ಮೊದಲನೆಯ ಸಲ ಅಲ್ಲ ಪದೇ ಪದೇ ಈ ಇಂತಹ ಹೇಳಿಕೆಗಳನ್ನು ನೀಡುತ್ತಾ ಬಂದಿರುತ್ತಾನೆ. ಇವನ ಮೇಲೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಯ ಕರ್ನಾಟಕ ಸಂಘಟನೆ ಆತನಿಗೆ ಬುದ್ದಿಕಲಿಸಬೇಕಾಗುತ್ತದೆ. ಕೂಡಲೆ ಮಾನ್ಯ ಕರ್ನಾಟಕ ಸರಕಾರ ಇಂಥವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಯ ಕರ್ನಾಟಕ ಸಂಘಟನೆ ಅಧಿಕಾರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಪ್ರಹ್ಲಾದ್ ವಾಗ್ಮೊರೆ, ತಾಲೂಕ ಅಧ್ಯಕ್ಷ ಆಕಾಶ್ ನಂದಗಾoವ್, ರಿಯಾಜ್ ಬಿರಾದಾರ್, ಅಶೋಕ್, ಭಜಂತ್ರಿ, ಮನೋಜ್ ಕಟಗೇರಿ, ಸುನಿಲ್, ಅಭಿಷೇಕ್ ತೇಲಿ, ಬೀರಪ್ಪ, ತುರಾಯಿ ಸಂಜಯ್ ವಾಗ್ಮೊಡೆ ಸುನಿಲ್, ಮಂಗಸುಳಿ ಗಂಗಾಧರ್, ತುರಾಯಿ ಅಕ್ಷಯ್, ಪೂಜಾರಿ ಸಚಿನ್, ಕಾಂಬಳೆ ಬಸವರಾಜ್, ನಂದಗಾವ್ ಶ್ರೀಧರ್ ಪಾಟೀಲ್, ನಾಗರಾಜ್ ಇನ್ನಿತರ ಉಪಸ್ಥಿತರಿದ್ದರು