

ದಾವಣಗೆರೆ (ಆ 21) : ಈಗತಾನೆ ಪ್ರಪಂಚದ ಜ್ಞಾನಕ್ಕಾಗಿ ಹಂಬಲಿಸುತ್ತಿರುವ ಪುಟ್ಟ ಪೊರ ದೇಶವೇ ಮೆಚ್ಚುವ ಸಾಧನೆ ಮಾಡಿದ್ದಾನೆ. ಕೇವಲ 1 ವರ್ಷ ಮೂರು ತಿಂಗಳಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಸೇರ್ಪಡೆಗೊಂಡಿದ್ದಾನೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದ ಕಾಂಗ್ರೆಸ್ ಮುಖಂಡರು ಗ್ರಾಮ ಪಂಚಾಯಿತಿ ಸದಸ್ಯರಾದ ಗುಡ್ಡಣ್ಣ ಗೀತಾ ದಂಪತಿ ಮೊಮ್ಮಗ ಮನ್ವಿತ್ ಸಿ.ಎಸ್ ಈ ಅಪ್ರತಿಮ ಸಾಧನೆ ಮಾಡಿದ್ದ ಪುಟ್ಟ ಕಂದ. ಮನ್ವಿತ್ ತಾಯಿ ಸೌಮ್ಯಶ್ರೀ ಜಿ ತಂದೆ ಚೇತನ್ ಎಂ ಈ ದಂಪತಿ ವೃತ್ತಿಯಲ್ಲಿ ಸಾಫ್ಟ್‍ವೇರ್ ಇಂಜಿಯರ್. ಮನೆಯಲ್ಲಿದ್ದ ಸಂದರ್ಭದಲ್ಲಿ ತನ್ನ ಮಗ ಮನ್ವಿತ್‍ಗೆ ಸಾಮನ್ಯ ಜ್ಞಾನದ ಬಗ್ಗೆ ಹೇಳಿಕೊಟ್ಟಿದ್ದಾರೆ. ಇನ್ನೂ ಮಾತು ಬರುವ ಸಂದರ್ಭದಲ್ಲೇ ಮನ್ವಿತ್ ಅಪಾರ ಜ್ಞಾಪಕ ಶಕ್ತಿ ಹೊಂದಿದ್ದು ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಸೇರ್ಪಡೆಗೊಂಡಿದ್ದಾನೆ.

ಕೇವಲ 1 ವರ್ಷ 3 ತಿಂಗಳಲ್ಲಿ ಸುಮಾರು 20 ದೇಶಗಳ ಧ್ವಜಗಳು, 25 ಕ್ಕೂ ಹೆಚ್ಚು ಪಕ್ಷಿಗಳು, 25 ಕ್ಕೂ ಅಧಿಕ ತರಕಾರಿಗಳು 30 ಕ್ಕೂ ಅಧಿಕ ಪ್ರಾಣಿಗಳು 18 ಹೆಸರಾಂತ ಪರ್ವತಗಳು, ಪ್ರಾಣಿಗಳು ಹಾಗೂ ವರ್ಣಮಾಲೆಗಳನ್ನ ಗುರುತಿಸುವಲ್ಲಿ ಯಶಸ್ವಿಯಾಗಿದ್ದಾನೆ. ಈ ಕಾರಣ ಅವರ ತಂದೆತಾಯಿ ಇಂಡಿಯಾ ಬುಕ್ ಆಫ್ ರೇಕಾರ್ಡ್‍ಗೆ ಶಿಫಾರಸ್ಸು ಮಾಡಿದ್ದರು. ಇದೀಗ ಮನ್ವಿತ್ ಈ ಸಾಧನೆಯನ್ನ ರೆಕಾರ್ಡ್ ಎಂದು ಘೋಷಣೆ ಮಾಡಿ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಈ ಪುಟ್ಟಪೊರನ ಸಾಧನೆ ಮೆಚ್ಚಿ ಶಾಸಕರಾದ ಬಸವರಾಜು ವಿ ಶಿವಗಂಗಾ ಸೇರಿದಂತೆ ಗ್ರಾಮದ ಮುಖಂಡರು ಸನ್ಮಾನಿಸಿ ಅಭಿನಂಧನೆ ಸಲ್ಲಿಸಿ ಶುಭಕೋರಿದ್ದಾರೆ. ಆಡುವ ವಯಸ್ಸಲ್ಲೇ ದೊಡ್ಡ ಸಾಧನೆ ಮಾಡಿದ ಈ ಬಾಲಕ ಮುಂದೆಯೇ ಹೆಚ್ಚು ಸಾಧನೆ ಮಾಡಲಿ ಎಂಬುದು ಎಲ್ಲರ ಆಶಯ.