

ದಾವಣಗೆರೆ(ಆ21) : ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ವತಿಯಿಂದ ಮಾಧ್ಯಮ ದಿನಾಚರಣೆ ಮತ್ತು ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ 27ರಂದು ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ. ಪ್ರತಿವರ್ಷದಂತೆ ಈ ಬಾರಿಯೂ ಕೂಟದ ಸದಸ್ಯರಿಗೆ ಮಾಧ್ಯಮ ಪ್ರಶಸ್ತಿ ನೀಡಲಾಗುವುದು. ಈ ಬಾರಿ 9 ಜನರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಈ ಬಾರಿ ಪ್ರಶಸ್ತಿ ನೀಡಲು ಸಮಿತಿ ರಚಿಸಲಾಗಿತ್ತು. ಅದರಂತೆ ಸಮಿತಿಯು ಸೋಮವಾರ ಸಭೆ ನಡೆಸಿ ಎಂಟು ಜನ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಭಾರತಿ ಸಂಪಾದಕ ಮಲ್ಲಿಕಾರ್ಜುನ ಕಬ್ಬೂರ್,
ವಿಜಯವಾಣಿಯ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, ವಾರ್ತಾ ವಿಹಾರ ಸುದ್ದಿ ಸಂಪಾದಕ ಎಂ.ವೈ. ಸತೀಶ್.
ದಾವಣಗೆರೆ ಕನ್ನಡಿಗ ಸಂಪಾದಕ ಆರ್. ರವಿ, ಜನತಾವಾಣಿ ಹಿರಿಯ ವರದಿಗಾರ ಎನ್.ವಿ. ಶ್ರೀನಿವಾಸ, ನ್ಯೂಸ್ 18 ಕನ್ನಡ ಸುದ್ದಿವಾಹಿನಿ ಕ್ಯಾಮರಾ ಮ್ಯಾನ್/ ಜಿಲ್ಲಾ ವರದಿಗಾರ ಎ.ಪಿ. ಸಂಜಯ್, ರಾಜ್ ನ್ಯೂಸ್ ವರದಿಗಾರ ರಾಮಪ್ರಸಾದ್ ಸುವರ್ಣ ಕನ್ನಡ ವಾಹಿನಿಯ ಕ್ಯಾಮರಾ ಮ್ಯಾನ್ ಕಿರಣ್ ಕುಮಾರ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಆಯ್ಕೆಗೊಂಡವರಿಗೆ ಮಾಧ್ಯಮ ದಿನಾಚರಣೆಯ ಕಾರ್ಯಕ್ರಮದಲ್ಲಿ ನಗದು ಮತ್ತು ಪ್ರಶಸ್ತಿಯನ್ನು ಗಣ್ಯರಿಂದ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷರಾದ ಕೆ. ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಡಾ. ಸಿ. ವರದರಾಜ್, ಖಜಾಂಚಿ ಮಧು ನಾಗರಾಜ್ ಕುಂದುವಾಡ ತಿಳಿಸಿದ್ದಾರೆ.
